ಚೈತನ್ಯ ಶಾಲೆಗೆ ಸ್ವತಂತ್ರವಾದ ಯಾವ ಆರ್ಥಿಕ ಮೂಲವೂ ಇಲ್ಲ. ಆದ್ದರಿಂದ ಈ ಶಾಲೆಯು ಪಾಲಕರು, ಹಿತೈಷಿಗಳು ಮತ್ತು ಸಾರ್ವಜನಿಕರು ನೀಡುವ ದೇಣಿಗೆ ಯಿಂದಲೇ ನಡೆಯಬೇಕಿದೆ. ಹಾಗಾಗಿ ಸಂಸ್ಥೆಗಳು ಹಾಗೂ ಸಹೃದಯಿಗಳಿಂದ ಸಹಕಾರ ಕೋರುತ್ತಿದ್ದೇವೆ.

ದೇಣಿಗೆಗಳು ಸೆಕ್ಷನ್ 80G ಅಡಿಯಲ್ಲಿ ಅರ್ಹವಾಗಿರುತ್ತವೆ

ಬ್ಯಾಂಕ್ ಖಾತೆಯ ವಿವರ :
A/C No: 64135388594
Chaithanya Special Education Trust (R),
State Bank of India, Sagar
IFSC Code: SBIN 0007906

ತಮ್ಮ ಸಹಕಾರ ಈ ಕೆಳಗಿನ ರೂಪದಲ್ಲಿಯೂ ಇರಬಹುದಾಗಿದೆ.

  • ಯಾವುದೇ ಮೊತ್ತದ ಹಣಕಾಸಿನ ದೇಣಿಗೆ.
  • ವಾರ್ಷಿಕವಾಗಿ ಒಂದು ಮಗುವಿನ ಶಿಕ್ಷಣ ವೆಚ್ಚ ಬರಿಸುವುದು.
  • ಆರೋಗ್ಯ ಸೇವೆ, ಆಪ್ತಸಲಹೆ ಸೇವೆ, ಉಪಹಾರ, ವಾರ್ಷಿಕೋತ್ಸವ ಆಚರಣೆ – ಮುಂತಾದ ಚಟುವಟಿಕೆಗಳ ವೆಚ್ಚದ ಕುರಿತಾಗಿನ ದೇಣಿಗೆ.
  • ಶಿಕ್ಷಕರಿಗೆ ನೀಡಬೇಕಾದ ಗೌರವಧನದ ಕುರಿತು ದೇಣಿಗೆ.
  • ಶಾಲೆಗೆ ಬೇಕಾದ ಪೀಠೋಪಕರಣ, ಆಟಿಕೆ ಸಾಮಾನು, ತರಬೇತಿ ಉಪಕರಣಗಳು, ಕಂಪ್ಯೂಟರ್ ಇತ್ಯಾದಿಗಳನ್ನು ಒದಗಿಸಬಹುದು ಅಥವಾ ಆ ಕುರಿತಾಗಿ ಹಣಕಾಸಿನ ದೇಣಿಗೆ ನೀಡಬಹುದು.
  • ಸಂಸ್ಥೆಗಳು ಶಾಲೆಯನ್ನು ದತ್ತು ಪಡೆಯುವ ಮೂಲಕ ತಮ್ಮ ಸಹಾಯ – ಸಹಕಾರ ನೀಡಬಹುದು.