ಈವರೆಗಿನ ಯಶೋಗಾಥೆ:

ಪ್ರಸ್ತುತ ೩೫ ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
೨೦೧೨ರಲ್ಲಿ ಶಿವಮೊಗ್ಗದಲ್ಲಿ ನಡೆದ ಜಿಲ್ಲಾಮಟ್ಟದ ವಿಶೇಷ ಮಕ್ಕಳಿಗಾಗಿನ ಒಲಿಂಪಿಕ್ಸ್ ನಲ್ಲಿ ಚೈತನ್ಯ ಶಾಲೆಯ ಮಕ್ಕಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಮಾರ್ಚ್ ೨೦೧೩ರಲ್ಲಿ ಬಳ್ಳಾರಿಯಲ್ಲಿ ನಡೆದ ವಿಶೇಷ ಮಕ್ಕಳಿಗಾಗಿನ ರಾಜ್ಯಮಟ್ಟದ ಒಲಿಂಪಿಕ್ಸ್ ನಲ್ಲಿ ಮತ್ತು ಡಿಸೆಂಬರ್ ೨೦೧೩ರಲ್ಲಿ ರಾಜಸ್ತಾನದ ಅಜ್ಮೀರ್ ನಲ್ಲಿ ರಾಷ್ಟ್ರಮಟ್ಟದ ವಿಶೇಷ ಮಕ್ಕಳಿಗಾಗಿನ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
೨೦೧೪ ಫೆಬ್ರವರಿಯಲ್ಲಿ ಮೈಸೂರು ರೋಟರಿ ಮಿಡ್ ಟೌನ್ ನವರು ವಿಶೇಷ ಮಕ್ಕಳಿಗಾಗಿ ನಡೆಸಿದ ರಾಜ್ಯಮಟ್ಟದ ಆಟೋಟ ಸ್ಪರ್ಧೆಯಲ್ಲಿ ೫ ಮಕ್ಕಳು ಭಾಗವಹಿಸಿ, ಮೂರು ಮಕ್ಕಳು ಬೆಳ್ಳಿ ಪದಕಗಳನ್ನು ಗಳಿಸಿರುತ್ತಾರೆ.
ಡಿಸೆಂಬರ್ ೨೦೧೫ರಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಚೈತನ್ಯ ಶಾಲೆಯ ಮಕ್ಕಳು ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಏಪ್ರಿಲ್ ೨೦೧೬ರಲ್ಲಿ ಶಾಲಾ ವಾರ್ಷಿಕೋತ್ಸವದಲ್ಲಿ ಚೈತನ್ಯ ಶಾಲೆಯ ಮಕ್ಕಳಿಂದ ನಾಟಕ ಪ್ರದರ್ಶನವನ್ನೂ ಏರ್ಪಡಿಸಿ ಯಶಸ್ವಿಯಾಗಿದ್ದೇವೆ.
ಜೂಲೈ ೨೦೧೬ರಲ್ಲಿ ವಿಶೇಷ ಮಕ್ಕಳಿಗಾಗಿನ ಒಲಿಂಪಿಕ್ಸ್ ನವರು ಬೆಂಗಳೂರಿನಲ್ಲಿ ನಡೆಸಿದ ವಿವಿಧ ಸ್ಪರ್ಧೆಯಲ್ಲಿ ನಮ್ಮ ಮಕ್ಕಳು ಭಾಗವಹಿಸಿ ಗಮನ ಸೆಳೆದಿದ್ದಾರೆ.
ಆಗಸ್ಟ್ ೨೦೧೬ರಲ್ಲಿ ವಿಶೇಷ ಮಕ್ಕಳಿಗಾಗಿನ ಒಲಿಂಪಿಕ್ಸ್ ನವರು ನಡೆಸಿದ ರಾಷ್ಟ್ರಮಟ್ಟದ ತರಬೇತಿ ಶಿಬಿರದಲ್ಲಿ, ಆಂಧ್ರಪ್ರದೇಶದ ಅನಂತಪುರಂಗೆ ನಮ್ಮ ಚೈತನ್ಯ ಶಾಲೆಯ ಒಬ್ಬ ಮಗು ಹಾಗೂ ಒಬ್ಬ ವಿಶೇಷ ಶಿಕ್ಷಕಿ ಆಯ್ಕೆಯಾಗಿ ಭಾಗವಹಿಸಿ ಯಶಸ್ಸುಗಳಿಸಿದ್ದಾರೆ.