ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್(ರಿ)

(ಸರ್ಕಾರದ ಮಾನ್ಯತೆ ಪಡೆದಿದೆ) 80G, 12A

“ಮುಂಗರವಳ್ಳಿ” ಸಾಗರದಿಂದ ಸುಮಾರು ೬ ಕಿ. ಮೀ ದೂರದಲ್ಲಿರುವ ಪುಟ್ಟ ಹಳ್ಳಿ. ಸುತ್ತಮುತ್ತಲ ಹಳ್ಳಿಗಳ ಸಮಾನ ಮನಸ್ಕರ ಸಹಕಾರದೊಂದಿಗೆ ವಿಶೇಷ ಮಕ್ಕಳಿಗಾಗಿ ಕೆಲಸ ಮಾಡುವ ಸಲುವಾಗಿ ರೂಪುಗೊಂಡ ಸಂಸ್ಥೆ “ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್”.
ಮಾನಸಿಕ ಹಾಗೂ ಬೌದ್ಧಿಕವಾಗಿ ಭಿನ್ನವಾದ ಶಕ್ತಿ ಇರುವ ಮಕ್ಕಳ ಸೇವೆ ಮಾಡುವುದೇ ಇದರ ಮುಖ್ಯ ಉದ್ದೇಶ.
ಚೈತನ್ಯ ಶಾಲೆಗೆ ಸರ್ಕಾರದಿಂದ ಅನುದಾನ ಲಭ್ಯವಿಲ್ಲ. ಸ್ವತಂತ್ರವಾದ ಯಾವ ಆರ್ಥಿಕ ಮೂಲವೂ ಇಲ್ಲ. ಆದ್ದರಿಂದ ಈ ಶಾಲೆಯು ಪಾಲಕರು, ಹಿತೈಷಿಗಳು ಮತ್ತು ಸಾರ್ವಜನಿಕರು ನೀಡುವ ದೇಣಿಗೆ ಯಿಂದಲೇ ನಡೆಯಬೇಕಿದೆ. ಸದ್ಯ ಮುಂಗರವಳ್ಳಿಯ ಸರ್ಕಾರ ಶಾಲೆಯ ಒಂದು ಕೊಠಡಿಯಲ್ಲಿ ‘ಚೈತನ್ಯ ಶಾಲೆ’ ನಡೆಸಲಾಗುತ್ತಿದೆ. ಚೈತನ್ಯ ಟ್ರಸ್ಟ್ ನ ಅಧ್ಯಕ್ಷೆ ಶಾಂತಲಾ ಅವರ ಮನೆಯ ಒಂದು ಭಾಗ ಫಿಸಿಯೋ ತೆರಪಿ ಕೇಂದ್ರವಾಗಿದೆ.
ಸುಮಾರು ೩೫ ಕಿ. ಮೀ ದೂರದಿಂದ ಮಕ್ಕಳನ್ನು ಕರೆತರಲಾಗುತ್ತಿದೆ. ಅಂದಾಜಿನ ಪ್ರಕಾರ ಸುಮಾರು ೧೦೦-೧೫೦ ವಿಶೇಷ ಮಕ್ಕಳು ಈ ವ್ಯಾಪ್ತಿಯಲ್ಲಿ ಇದ್ದಾರೆ.
ಟ್ರಸ್ಟ್ ವತಿಯಿಂದ ಶಿಕ್ಷಕಿಯರಿಗೂ ಸಹ ವಿಶೇಷ ಮಕ್ಕಳ ಶಿಕ್ಷಣದ ತರಬೇತಿ ನೀಡಲಾಗುತ್ತದೆ.
ವಿಶೇಷ ಮಕ್ಕಳ ಆರೋಗ್ಯದಲ್ಲಿ ಕಾಣುತ್ತಿರುವ ಸುಧಾರಣೆ ಟ್ರಸ್ಟಿ ಗಳಲ್ಲಿ ಆಶಾಕಿರಣ ಮೂಡಿಸಿದೆ.

“ನಮ್ಮ ಜೀವನದ ಸಾರ್ಥಕತೆಯು ನಮ್ಮನ್ನು ನಾವು ಪ್ರಾಮಾಣಿಕವಾಗಿ ಸಮಾಜದ ಸೇವೆಯಲ್ಲಿ ತೊಡಗಿಸಿಕೊಳ್ಳುವುದರಲ್ಲೇ ಅಡಗಿದೆ.”

ಮಹಾತ್ಮಾ ಗಾಂಧಿ

ಟ್ರಸ್ಟ್ ನಡೆಸಿದ ಕಾರ್ಯಕ್ರಮಗಳು

Year 2013-14
Year 2014-15
Year 2015-16
Year 2016-17

ಚೈತನ್ಯ ವಿಶೇಷ ಮಕ್ಕಳ ಶಾಲೆ:

ಚೈತನ್ಯ ವಿಶೇಷ ಶಾಲೆಯು ೨೦೧೩ರಲ್ಲಿ ಸಾಗರದ ಬಳಿಯ ಮುಂಗರವಳ್ಳಿಯಲ್ಲಿ ಪ್ರಾರಂಭವಾಯಿತು.
ಮಾನಸಿಕ ಹಾಗೂ ಬೌದ್ಧಿಕವಾಗಿ ಭಿನ್ನವಾದ ಶಕ್ತಿಯುಳ್ಳ ಮಕ್ಕಳಿಗೆ ಉತ್ಕ್ರುಷ್ಟ ಶಿಕ್ಷಣ ನೀಡಿ, ಅವರು ಎಲ್ಲರಂತೆ ಜೀವನದಲ್ಲಿ ಯಶಸ್ಸು ಸಾಧಿಸುವಂತೆ ತರಬೇತಿ ನೀಡುವುದೇ ಈ ಶಾಲೆಯ ಪ್ರಮುಖ ಕಾರ್ಯ.
ಶಾಲೆ ಶಿಕ್ಷಣದ ನಂತರದ ಬದುಕಿಗೆ ಬೇಕಾದ ಕೌಶಲ್ಯವನ್ನು ಕಲಿಸಿ, ಈ ಮಕ್ಕಳನ್ನು ಯಶಸ್ವೀ ಜೀವನ ನಡೆಸುವಂತೆ ಸಶಕ್ತಗೊಳಿಸುವುದು ನಮ್ಮ ಆದ್ಯತೆ. ಇದಕ್ಕಾಗಿ ಅವರ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಸ್ವಾವಲಂಬಿಗಳನ್ನಾಗಿ ಮಾಡುವ ವಿವಿಧ ತರಬೇತಿ ಕಾರ್ಯಕ್ರಮಗಳನ್ನೂ ಆಯೋಜಿಸುವುದು ನಮ್ಮ ಆಶಯ.
ಪ್ರಸ್ತುತ ಈ ಶಾಲೆ ಒಂದು ಚಿಕ್ಕ ಪ್ರಯತ್ನವಾದರೂ, ಈ ತೆರನಾದ ಮಕ್ಕಳ ಬದುಕಿಗೆ ವಿಶ್ವಾಸ ತುಂಬುವ ಒಂದು ಸಮಗ್ರ ಶೈಕ್ಷಣಿಕ ಕೇಂದ್ರವಾಗಿ ರೂಪುಗೊಳ್ಳುವುದು ನಮ್ಮ ಭವಿಷ್ಯದ ಗುರಿ.

ಶಾಂತಲಾ ಸುರೇಶ್:

ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್(ರಿ) ನ ಅಧ್ಯಕ್ಷರು ಹಾಗೂ ಚೈತನ್ಯ ವಿಶೇಷ ಶಿಕ್ಷಣ ಶಾಲೆಯ ಮುಖ್ಯ ರೂವಾರಿ ಶ್ರೀಮತಿ ಶಾಂತಲಾ ಸುರೇಶ್ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮುಂಗರವಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಇವರು ವಿಶೇಷ ಮಕ್ಕಳಿಗೆ ಅವರ ಮನೆಗಳಿಗೇ ತೆರಳಿ ಶಿಕ್ಷಣ ನೀಡುವ ‘ಗೃಹಾಧಾರಿತ ಶಿಕ್ಷಣ’ ಎಂಬ ಯೋಜನೆಯ ಮೂಲಕ ಈ ಕ್ಷೇತ್ರಕ್ಕೆ ಪ್ರವೇಶಿಸಿದರು. ಅಲ್ಲಿನ ಅನುಭವಗಳ ಮೂಲಕ ಹಾಗೂ ವಿಶೇಷ ಮಕ್ಕಳ ಬಗ್ಗೆ ಇರುವ ಮಮತೆ ಹಾಗೂ ಅವರುಗಳ ಪ್ರಗತಿಗೆ ಯಾವ ರೀತಿಯಲ್ಲಾದರೂ ಕಾರ್ಯ ನಿರ್ವಹಿಸಬೇಕೆಂಬ ತುಡಿತ ಇಂದು ಈ ವಿಶೇಷ ಶಿಕ್ಷಣ ಶಾಲೆಯ ಸಂಸ್ಥಾಪಕಿಯಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಲು ಕಾರಣವಾಗಿದೆ. ಅಲ್ಲದೆ ಈ ಕ್ಷೇತ್ರದ ಶಿಕ್ಷಣಕ್ಕೆ ಅವಶ್ಯಕವಾಗಿರುವ ಡಿ ಇ ಸಿ ಎಸ್ ಇ (ಎಂ ಆರ್ ) ಮತ್ತು ಎಫ್ ಸಿ ಇ ಡಿ ಎಂಬ ಕೋರ್ಸ್ ಗಳನ್ನು ಮಾಡಿಕೊಂಡಿರುತ್ತಾರೆ. ಮೂರು ವರ್ಷಗಳಿಂದ ಈ ಶಾಲೆಯ ಮಕ್ಕಳ ಪಾಲನೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಮಕ್ಕಳು ವಿಶೇಷ ಮಕ್ಕಳಿಗಾಗಿ ನಡೆಯುವ ಒಲಿಂಪಿಕ್ಸ್ ನಲ್ಲಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಗಳಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಇವರ ಚಟುವಟಿಕೆಗೆ ಇವರ ಕುಟುಂಬ ಪೂರ್ಣ ಸಹಕಾರ ನೀಡುತ್ತಿದೆ.

ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್ (ರಿ)

ಶಾಂತಲಾ ಸುರೇಶ್ (ಅಧ್ಯಕ್ಷರು) 9480504987
ಸುರೇಶ್ ಕೆ. ಏನ್. (ಕಾರ್ಯದರ್ಶಿ)
ಎಂ. ಡಿ. ನಾಗರಾಜ ಭಟ್ (ಖಜಾಂಚಿ)
ಪೂರ್ಣಚಂದ್ರಿಕಾ ಸುಹಾಸಿನಿ 9480331813
ಅಜಿತಾ ಪ್ರಸನ್ನ
ಶ್ಯಾಮಲಾ ಬಿ. ಭಟ್
ಬಿ. ಹೆಚ್. ರಾಘವೇಂದ್ರ 9449363350
ಗಣಪತಿ ವಿ. ಹೆಗಡೆ
ನಾಗರಾಜ ಎಂ.
ಅರ್ಚನಾ ಶ್ರೀಕಾಂತ್
ಜಯಶ್ರೀ ಗಣೀಶಮೂರ್ತಿ

ಸಲಹಾ ಮಂಡಳಿ

ಅನಂತ್ ಹೆಗಡೆ ಅಶೀಸರ:
ಮಾಜಿ ಅಧ್ಯಕ್ಷರು – ಪಶ್ಚಿಮ ಘಟ್ಟ ಕಾರ್ಯಪಡೆ, ಸರ್ಕಾರ. ಕರ್ನಾಟಕ ಸಂಚಾಲಕರು – ವೃಕ್ಷ ಲಕ್ಷ ಆಂಧೋಲನ

ಚಂದ್ರಶೇಖರ ಕಾಕಲ್:
ಸಂಸ್ಥಾಪಕರು – ಕಾಕಲ್ ಫೌಂಡೇಶನ್, ಮಾಜಿ SVP – ಇನ್ಫೋಸಿಸ್ ಲಿಮಿಟೆಡ್, ಮಾಜಿ COO – L&T ಇನ್ಫೋಟೆಕ್ ಲಿಮಿಟೆಡ್

ಲಕ್ಷ್ಮೀನಾರಾಯಣ ಕಾಶಿ:
ಅಧ್ಯಕ್ಷರು – ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಸದಸ್ಯರು – ಕರ್ನಾಟಕ ಯಕ್ಷಗಾನ ಅಕಾಡೆಮಿ

ರಾಮಕೃಷ್ಣ ಶೇರೆಗಾರ್:
ವಾಣಿಜ್ಯೋದ್ಯಮಿ, ಕುಂದಾಪುರ

ಶಿಕ್ಷಕಿಯರು
ಜಾನಕಿ ಆರ್.
ಮೇಘಾ ಎಸ್. ಪಿ.
ತುಷಾ
ಮಂಜುಳಾ ಕೆ. ಆರ್.

ಸಹಾಯಕಿ
ಸೋಮಮ್ಮ